Wednesday, 22 April 2020

ಅಧ್ಯಾಯ: 8 ಜೀವಿಗಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?

ಅಧ್ಯಾಯ: 8
ಜೀವಿಗಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?


ಪ್ರಶ್ನೆಗಳು:
1. ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಡಿ.ಎನ್.ಎ ಸ್ವಪ್ರತೀಕರಣದ ಮಹತ್ವವೇನು?

ಜೀವಿಗಳು ತಮ್ಮನೇ ಹೋಲುವ ದೇಹ ವಿನ್ಯಾಸ, ರಚನೆಯನ್ನು ಹೊಂದವ ಮಾಹಿತಿಯನ್ನು ಪೀಳಿಗೆಯು ತಂದೆ ತಾಯಿಯಿಂದ ಪಡೆದ ಡಿ.ಎನ್.ಎ ಅಣುವಿನಲ್ಲಿರುತ್ತದೆ. ಡಿ.ಎನ್.ಎ ಅಣುವಿನಲ್ಲಿ ಬದಲಾವಣೆ ಉಂಟಾದರೇ ಜೀವಿಯ ದೇಹ ವಿನ್ಯಾಸವೇ ಬದಲಾಗುತ್ತದೆ. ಆದುದರಿಂದ ಡಿ.ಎನ್.ಎ ಸ್ವಪ್ರತೀಕರಣದ ಮೂಲಕ ತನ್ನನ್ನು ತಾನೆ ನಕಲು ಮಾಡಿಕೊಳ್ಳುತ್ತದೆ.
2. ಭಿನ್ನತೆಯು ಒಂದು ಪ್ರಭೇದಕ್ಕೆ ಉಪಯುಕ್ತ. ಆದರೆ, ಒಂದು ಜೀವಿಗೆ ಅಗತ್ಯವಿಲ್ಲ ಏಕೆ?
ಉತ್ತರ: ಜೀವಿಗಳು ತಾವು ವಾಸಿಸುತ್ತಿರುವ ಆವಾಸಗಳಿಗೆ ಹೋದಾಣಿಕೆ ಮಾಡಿಕೊಂಡು ಜೀವಿಸುತ್ತಿರುತ್ತವೆ. ಪರಿಸರದಲ್ಲಿ ಉಂಟಾಗುವ ಬದಲಾಣೆಯಿಂದ ಜೀವಿಗಳು ನಶಿಸಬಹುದು. ಆದುದರಿಂದ ಬದಲಾದ ಪರಿಸರಕ್ಕೆ ಹೊಂದಿಕೊಂಡು ಜೀವಿಸಲು ಭಿನ್ನತೆಯು ಒಂದು ಪ್ರಭೇದಕ್ಕೆ ಉಪಯುಕ್ತವಾಗಿದೆ, ಆದರೆ ಜೀವಿಗೆ ಅಗತ್ಯವಿಲ್ಲ.


1. ದ್ವಿವಿಧಳನವು ಬಹುವಿಧಳನದಿಂದ ಹೇಗೆ ಭಿನ್ನವಾಗಿದೆ?
ಉತ್ತರ:  ದ್ವಿವಿಧಳನ    ಬಹುವಿಧಳನ: ಏಕಕೋಶ ಜೀವಿಗಳಲ್ಲಿ ಜೀವಕೋಶವು ವಿಭಜನೆಯ ಮೂಲಕ ಹೊಸ ಜೀವಿ ಸೃಷ್ಠಿಯಾಗುವುದನ್ನು ವಿಧಳನ ಎನ್ನುವರು.
 ಉದಾ: ಬಹುತೇಕ ಬ್ಯಾಕ್ಟೀರಿಯಾಗಳಲ್ಲಿ, ಅಮೀಬಾದಲ್ಲಿ ತಾಯಿಕೋಶವು ಎರಡು ಮರಿಕೋಶಗಳಾಗಿ ವಿಭಜನೆ ಹೊಂದುವುದು.

ಬಹುವಿಧಳನ: ಒಂದೇ ಬಾರಿಗೆ ಅನೇಕ ಮರಿ ಜೀವಕೋಶಗಳು ಉಂಟಾಗುವುದನ್ನು ಬಹುವಿಧಳನ ಎನ್ನುವರು.
.ಉದಾ: ಮಲೇರಿಯಾ ರೋಗಕ್ಕೆ ಕಾರಣವಾದ ಪ್ಲಾಸ್ಮೋಡಿಯಂ ವಿಭಜನೆ ಹೊಂದಿ ಅನೇಕ ಮರಿ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ.

2. ಒಂದು ವೇಳೆ ಬೀಜಕಗಳ ಮೂಲಕ ಒಂದು ಜೀವಿಯು ಸಂತಾನೋತ್ಪತ್ತಿ ನಡೆಸಿದರೆ ಅದಕ್ಕಾಗುವ ಪ್ರಯೋಜನವೇನು?
ಬೀಜಕಗಳ ಮೂಲಕ ಒಂದು ಜೀವಿಯು ಸಂತಾನೋತ್ಪತ್ತಿ ನಡೆಸಿದರೆ ಅದಕ್ಕಾಗುವ ಪ್ರಯೋಜನಗಳೆಂದರೇ,
1. ಅತೀ ಹೆಚ್ಚು ಸಂಖ್ಯೆಯ ಬೀಜಕಗಳು ಬೀಜಕಧಾನಿಗಳಲ್ಲಿ ಉತ್ಪತ್ತಿಯಾಗುವುದು.
2. ಬೀಜಕಗಳು ಸುಲಭವಾಗಿ ಗಾಳಿಯ ಮೂಲಕ ವರ್ಗಾವಣೆಯಾಗುವುದು.
3. ಬೀಜಕಗಳು ಸಂರಕ್ಷಣೆಯ ಕವಚ ಹೊಂದಿದ್ದು, ತೇವಾಂಶಯಕ್ತ ಮೇಲ್ಮೈ ಸಂಪರ್ಕ ಸಿಗುವವರೆಗೂ ಕವಚವು ರಕ್ಷಣೆ ಒದಗಿಸುತ್ತದೆ

3. ಹೆಚ್ಚು ಸಂಕೀರ್ಣ ಜೀವಿಗಳು ಪುನರುತ್ಪಾದನೆಯ ಮೂಲಕ ಹೊಸ ಜೀವಿಗಳನ್ನು ಏಕೆ ಸೃಷ್ಠಿಸಲಾರವು ಎಂಬುದಕ್ಕೆ ನೀವು ಕಾರಣಗಳನ್ನು ಯೋಚಿಸುವಿರಾ?
ಉತ್ತರ: ಸರಳ ಜೀವಿಗಳಾದ ಹೈಡ್ರಾ, ಪ್ಲನೇರಿಯಾ ಅತ್ತಂತ ಸರಳವಾದ ಅಂಗಾಶಗಳನ್ನು ಹೊಂದಿದ್ದು ಸುಲಭವಾಗಿ ಪುನರುತ್ಪಾದನೆಯ ಮೂಲಕ ಹೊಸ ಜೀವಿಗಳನ್ನು ಸೃಷ್ಠಿಸುತ್ತವೆ. ಆದರೇ ಹೆಚ್ಚು ಸಂಕೀರ್ಣ ಜೀವಿಗಳು ಸಂಕೀರ್ಣವಾದ ಅಂಗಾಂಶಗಳು ಮತ್ತು ಅಂಗವ್ಯೂಹಗಳನ್ನು ಒಳಗೊಂಡಿರುವುದರಿಂದ ಹೊಸ ಜೀವಿಗಳನ್ನು ಸೃಷ್ಠಿಸಲಾರವು.

4. ಕೆಲವು ವಿಧದ ಸಸ್ಯಗಳನ್ನು ಬೆಳೆಸಲು ಕಾಯಜ ಸಂತಾನೋತ್ಪತ್ತಿ ಏಕೆ ರೂಢಿಯಲ್ಲಿದೆ?
ಉತ್ತರ: ಬೀಜಗಳನ್ನು ಉತ್ಪತ್ತಿ ಮಾಡವÀ ಸಾಮಥ್ರ್ಯ ಕಳೆದುಕೊಂಡಿರುವುದರಿಂದ ಕೆಲವು ಸಸ್ಯಗಳಾದ ಬಾಳೆ, ಗುಲಾಬಿ, ಮಲ್ಲಿಗೆ ಸಸ್ಯಗಳು ಕಾಯಜ ಸಂತಾನೋತ್ಪತ್ತಿಯನ್ನು ರೂಢಿಸಿಕೊಂಡಿವೆ.

5. ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಡಿ,ಎನ್,ಎ ಸ್ವಪ್ರತೀಕರಣವು ಏಕೆ ಒಂದು ಅತ್ಯಗತ್ಯ ಭಾಗವಾಗುದೆ?
ಜೀವಿಗಳು ತಮ್ಮನೇ ಹೋಲುವ ದೇಹ ವಿನ್ಯಾಸ, ರಚನೆಯನ್ನು ಹೊಂದವ ಮಾಹಿತಿಯನ್ನು ಪೀಳಿಗೆಯು ತಂದೆ ತಾಯಿಯಿಂದ ಪಡೆದ ಡಿ.ಎನ್.ಎ ಅಣುವಿನಲ್ಲಿರುತ್ತದೆ. ಡಿ.ಎನ್.ಎ ಅಣುವಿನಲ್ಲಿ ಬದಲಾವಣೆ ಉಂಟಾದರೇ ಜೀವಿಯ ದೇಹ ವಿನ್ಯಾಸವೇ ಬದಲಾಗುತ್ತದೆ. ಡಿ.ಎನ್.ಎ ಸ್ವಪ್ರತೀಕರಣದ ಮೂಲಕ ತನ್ನನ್ನು ತಾನೆ ನಕಲು ಮಾಡಿಕೊಳ್ಳುತ್ತದೆ. ಆದುದರಿಂದ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಡಿ,ಎನ್,ಎ ಸ್ವಪ್ರತೀಕರಣವು ಒಂದು ಅತ್ಯಗತ್ಯ ಭಾಗವಾಗಿದೆ.

1. ಪರಾಗಸ್ಪರ್ಶ ಪ್ರಕ್ರಿಯೆಯು ನಿಶೇಚನಕ್ಕಿಂತ ಹೇಗೆ ಭಿನ್ನವಾಗಿದೆ?
ಉತ್ತರ: ಪರಾಗಸ್ಪರ್ಶ ಕ್ರಿಯೆಯಲ್ಲಿ ಪರಾಗರೇಣುಗಳು ಕೇಸರದಿಂದ ಶಲಾಕಾಗ್ರಕ್ಕೆ ವರ್ಗಾವಣೆ ಹೊಂದುವುದು
ನಿಶೇಚನ ಕ್ರಿಯೆಯಲ್ಲಿ ಗಂಡುಲಿಂಗಾಣು ಮತ್ತು ಹೆಣ್ಣು ಲಿಂಗಾಣು ಸಂಯೋಗ ಹೊಂದುವುದು..

2. ವೀರ್ಯಕೋಶಿಕೆ ಮತ್ತು ಪ್ರೋಸ್ಟೇಟ್ ಗ್ರಂಥಿಗಳ ಕಾರ್ಯವೇನು?

ಉತ್ತರ: ಪ್ರೋಸ್ಟೇಟ್ ಗ್ರಂಥಿ ಮತ್ತು ವೀರ್ಯಕೋಶಿಕೆಗಳು ಸೃವಿಕೆಯನ್ನು ವೀರ್ಯನಾಳಕ್ಕೆ ಸೇರಿಸುವುದು. ಇದರಿಂದ ವೀರ್ಯಾಣುಗಳಿಗೆ ಪೋಷಣೆ ಮತ್ತು ಚಲನೆಗೆ ದ್ರವ ಮಾಧ್ಯಮ ದೊರೆಯುವುದು.

3. ಪ್ರೌಢಾವಸ್ಥೆಯ ಸಮಯದಲ್ಲಿ ಹುಡುಗಿಯರಲ್ಲಿ ಕಂಡುಬರುವ ಬದಲಾವಣೆಗಳೇನು?
ಉತ್ತರ: ಪ್ರೌಢಾವಸ್ಥೆಯಲ್ಲಿ/ ಹದಿಹರಯದಲ್ಲಿ ಹೆಣ್ಣುಮಕ್ಕಳಲ್ಲಿ ಉಂಟಾಗುವ ಬದಲಾಣೆಗಳು:
1. ಕಂಕಳು ಮತ್ತು ಜನನಾಂಗಗಳಲ್ಲಿ ಕೂದಲು ಬೆಳೆಯುವುದು.
2. ಸ್ತನಗಳ ಗಾತ್ರ ದೊಡ್ಡದಾಗುವುದು.
3. ಸ್ತನಾಗ್ರದ ತೊಟ್ಟುಗಳು ಗಾಢ ಬಣ್ಣ ಹೊಂದುವುದು.
4. ಋತುಚಕ್ರವು ಪ್ರಾರಂಭವಾಗುವುದು.

4. ತಾಯಿಯ ದೇಹದೋಳಗೆ ಭ್ರೂಣವು ಹೇಗೆ ಪೋಷಣೆ ಪಡೆಯುತ್ತದೆ?
ಉತ್ತರ: ತಾಯಿಯ ದೇಹದೋಳಗೆ ಭ್ರೂಣವು ಜರಾಯುವಿನ ಮೂಲಕ ಪೋಷಣೆ ಪಡೆಯುತ್ತದೆ.

5. ಒಬ್ಬ ಮಹಿಳೆಯು ಕಾಪರ್-ಟಿಯನ್ನು ಬಳಸುತ್ತಿದ್ದರೆ ಅದು ಲೈಂಗಿಕ ಸಂಪರ್ಕದ ಮೂಲಕ ಹರಡುವ ರೋಗಗಳಿಂದ ಅವಳನ್ನು ರಕ್ಷಿಸಲು ನೆರವಾಗುತ್ತದೆಯೇ?
ಉತ್ತರ: ಇಲ್ಲಾ.
ಮಹಿಳೆಯು ಕಾಪರ್-ಟಿಯನ್ನು ಬಳಸುವುದರಿಂದ ವೀರ್ಯಾಣುಗಳು ಅಂಡಕದೊಂದಿಗೆ ನಿಶೇಚನ ಹೊಂದುವುದನ್ನು ತಡೆಗಟ್ಟಬಹುದು. ಆದರೆ, ಲೈಂಗಿಕ ಸಂಪರ್ಕಕ್ಕೆ ಕಾರಣವಾದ ಸೂಕ್ಷ್ಮಾಣುಗಳನ್ನು ತಡೆಯಲು ಸಾಧ್ಯವಿಲ್ಲ. ಆದುದರಿಂದ ಲೈಂಗಿಕ ಸಂಪರ್ಕದ ಮೂಲಕ ಹರಡುವ  ರೋಗಗಳಿಂದ ಅವಳನ್ನು ರಕ್ಷಿಸಲು ನೆರವಾಗುವುದಿಲ್ಲ.
---------------------------------------------------------------
ಅಭ್ಯಾಸದ ಪ್ರಶ್ನೆಗಳು.

1. ಮೊಗ್ಗುವಿಕೆಯ ಮೂಲಕ ಅಲೈಂಗಿಕ ಸಂತಾನೋತ್ಪತ್ತಿ ನಡೆಸುವ ಜೀವಿ____________
ಅಮೀಬಾ    ಯೀಸ್ಟ್    ಪ್ಲಾಸ್ಮೋಡಿಯಮ್    ಲಿಶ್ಮೇನಿಯ.

ಉತ್ತರ: ಯೀಸ್ಟ್.

2. ಈ ಕೆಳಗಿನವುಗಳಲ್ಲಿ ಯಾವುದು ಮನುಷ್ಯರಲ್ಲಿ ಹೆಣ್ಣು ಸಂತಾನೋತ್ಪತ್ತಿವ್ಯೂಹದ ಭಾಗವಲ್ಲ.
ಅಂಡಾಶಯ   ಗರ್ಭಕೋಶ    ವೀರ್ಯನಾಳ    ಅಂಡನಾಳ

ಉತ್ತರ: ವೀರ್ಯನಾಳ 

3. ಪರಾಗಕೋಶವು ಈ ಕೆಳಗಿನವುಗಳನ್ನು ಹೊಂದಿದೆ.
ಪುಷ್ಪಪತ್ರಗಳು       ಅಂಡಾಣುಗಳು    ಶಲಾಕ    ಪರಾಗರೇಣುಗಳು.
ಉತ್ತರ: ಪರಾಗರೇಣುಗಳು.

4. ಅಲೈಂಗಿಕ ಸಂತಾನೋತ್ಪತ್ತಿಗಿಂತ ಲೈಂಗಿಕ ಸಂತಾನೋತ್ಪತ್ತಿಗಿರುವ ಅನುಕೂಲಗಳೇನು?

ಉತ್ತರ:  ಅಲೈಂಗಿಕ ಸಂತಾನೋತ್ಪತ್ತಿಗಿಂತ ಲೈಂಗಿಕ ಸಂತಾನೋತ್ಪತ್ತಿಗಿರುವ ಅನುಕೂಲಗಳೆಂದರೇ,
1. ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಹೆಚ್ಚು ಭಿನ್ನತೆಗಳು ಉಂಟಾಗುವುದು.
2. ಹೊಸ ಪೀಳಿಗೆಯು ತಂದೆ ಮತ್ತು ತಾಯಿಯ ಗುಣಗಳನ್ನು ಹೊಂದುವುದು.
3. ಭಿನ್ನತೆಗಳು ಜೀವಿಗಳ ವಿಕಾಸಕ್ಕೆ ಕಾರಣವಾಗುತ್ತವೆ.

5. ಮಾನವರಲ್ಲಿ ವೃಷಣಗಳು ಯಾವ ಕಾರ್ಯವನ್ನು ನಿರ್ವಹಿಸುತ್ತವೆ?
ಉತ್ತರ: ಗಂಡಿನಲ್ಲಿ ಎರಡು ವೃಷಣಗಳಿವೆ. ಇವು ವೀರ್ಯಾಣುಗಳೆಂಬ ಅಸಂಖ್ಯಾತ ಗಂಡುಲಿಂಗಾಣುಗಳನ್ನು ಉತ್ಪತ್ತಿ ಮಾಡುತ್ತದೆ.
ವೃಷಣವು ಟೆಸ್ಟೋಸ್ಟಿರಾನ್ ಹಾರ್ಮೋನ್ ಸೃವಿಸುವುದು. ಟೆಸ್ಟೋಸ್ಟಿರಾನ್ ಹಾರ್ಮೋನ್ ಪ್ರೌಢವಸ್ಥೆಯಲ್ಲಿ ಹುಡುಗರಲ್ಲಿ  ಕಂಡುಬರುವ ಬದಲಾವಣೆಗಳಿಗೆ ಕಾರಣವಾಗಿದೆ.

6. ಋತುಚಕ್ರವು ಏಕೆ ಉಂಟಾಗುತ್ತದೆ?
ಉತ್ತರ: ಫಲಿತಗೊಳ್ಳದ ಅಂಡವು ಪ್ರತಿ ತಿಂಗಳು ಯೋನಿಯ ಮೂಲಕ ರಕ್ತ ಮತ್ತು ಲೋಳೆಯೊಂದಿಗೆ ಹೊರಹೋಗುವ ಕ್ರಿಯೆಯನ್ನು ಋತುಚಕ್ರ ಎನ್ನುವರು.
ಆರೋಗ್ಯವಂತ ಮಹಿಳೆಯಲ್ಲಿ ಋತುಚಕ್ರವು 28 ದಿನಗಳಾಗಿರುತ್ತದೆ.
ಫಲಿತಗೊಳ್ಳದ ಅಂಡವು ಕೇವಲ ಒಂದು ದಿನ ಮಾತ್ರ ಜೀವಂತವಾಗಿರುತ್ತದೆ. ಫಲಿತ ಅಂಡವನ್ನು ಬರಮಾಡಿಕೊಳ್ಳಲು ಗರ್ಭಕೋಶದ ಒಳಸ್ತರಿಯು ರಕ್ತನಾಳಗಳನ್ನು ಒಳಗೊಂಡ ದಪ್ಪನಾದ ಸ್ಪಂಜಿನಂತೆ ಆಗಿರುತ್ತದೆ. ಅಂಡವು ಫಲಿತಗೊಳ್ಳದಿದ್ದಾಗ ಒಳಸ್ತರಿಯು ಬಿರುಕು ಬಿಟ್ಟು ರಕ್ತ ಮತ್ತು ಲೋಳೆಯಂತೆ ಯೋನಿಯ ಮೂಲಕ ಹೊರಹೋಗುವುದು.

7. ಒಂದು ಹೂವಿನ ನೀಳಛೇದ ನೋಟದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ.

 8. ಗರ್ಭನಿರೋಧಕತೆಯ ವಿವಿಧ ವಿಧಾನಗಳು ಯಾವುವು?
ಉತ್ತರ: ಯಾಂತ್ರಿಕ ವಿಧಾನ: ವೀರ್ಯಾಣುಗಳು ಅಂಡವನ್ನು ತಲುಪದಂತೆ ಯಾಂತ್ರಿಕವಾಗಿ ತಡೆಗಟ್ಟುವ ವಿಧಾನ.
ಕಾಂಡೋಮ್‍ಗಳು: ಲೈಗಿಂಕ ರೋಗಗಳು ಹರಡುವಿಕೆಯನ್ನು ತಡೆಗಟ್ಟುವುದರೊಂದಿಗೆ ಗರ್ಭಧಾರಣೆ ಆಗದಂತೆ ತಡೆಗಟ್ಟುತ್ತದೆ.
ಚೀಲ ಅಳವಡಿಕೆ: ಯೋನಿಯ ಒಳಗೆ ಚೀಲ ಅಳವಡಿಸುವುದರಿಂದ ಗರ್ಭಧಾರಣೆ ಆಗದಂತೆ ತಡೆಗಟ್ಟುವುದು.
ರಾಸಾಯನಿಕ ವಿಧಾನ: ಕರಲವು ಮಾತ್ರೆಗಳನ್ನು ಸೇವಿಸುವುದರಿಂದ ಹಾರ್ಮೋನ್ ಗಳ ಸಮತೋಲನ ಬದಲಾಯಿಸಿ, ಅಂಡಾಣು ಬಿಡುಗಡೆಗೊಳ್ಳದಂತೆ ಮತ್ತು ಫಲಿತಗೊಳ್ಳದಂತೆ ಎಡೆಯುವುದು. ಈ ವಿಧಾನದಲ್ಲಿ ಹಾರ್ಮೋನ್‍ಗಳ ಅಸಮತೋಲನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು.
ಗರ್ಭನಿರೋಧಕ ಸಾಧನಗಳು:
ವೆಂಕಿ ಮತ್ತು ಕಾಪರ್-ಟಿ: ವೆಂಕಿ ಮತ್ತು ಕಾಪರ್-ಟಿಯನ್ನು ಗರ್ಭಕೋಶದೋಳಗೆ ಅಳವಡಿಸುವ ಮೂಲಕ ಗರ್ಭಧಾರಣೆ ಆಗದಂತೆ ತಡೆಗಟ್ಟಬಹುದು. ಆದರೆ ಕೆವರಿಗೆ ಇವು ಗರ್ಭಕೋಶದ ಕೆರಳುವಿಕೆಯಿಂದ ಅಡ್ಡ ಪರಿಣಾಮ ಉಂಟುಮಾಡುತ್ತದೆ.
ಶಸ್ತ್ರ ಚಿಕಿತ್ಸಾ ವಿಧಾನ: ಪುರುಷರಲ್ಲಿ ವೀರ್ಯನಾಳವನ್ನುಶಸ್ತ್ರಚಿಕಿತ್ಸೆಯಿಂದ ತಡೆಒಡ್ಡುವ ಮೂಲಕ ವೀರ್ಯಾಣುವಿನ ವರ್ಗಾವಣೆಯನ್ನು ತಡೆಗಟ್ಟಬಹುದು
ಮಹಿಳೆಯರಲ್ಲಿ ಅಂಡನಾಳಕ್ಕೆ ಶಸ್ತ್ರಚಿಕಿತ್ಸೆಯಿಂದ ತಡೆಒಡ್ಡುವ ಮೂಲಕ ಅಂಡವು ಗರ್ಭಕೋಶ ಸೇರದಂತೆ ತದೆದು ಗರ್ಭಧಾರಣೆ ಆಗದಂತೆ ತಡೆಗಟ್ಟಬಹುದು.
ಗರ್ಭಪಾತ: ಬೇಡವಾದ ಭ್ರೂಣವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವ ವಿಧಾನವಾಗಿದೆ.
ಹೆಣ್ಣುಭ್ರೂಣ ಹತ್ಯೆಯನ್ನು ತಡೆಗಟ್ಟಲು ಜನನ ಪೂರ್ವ ಲಿಂಗ ನಿರ್ಧರಿಸುವಿಕೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದೆ.

9. ಏಕಕೋಶ ಜೀವಿಗಳು ಮತ್ತು ಬಹುಕೋಶ ಜೀವಿಗಳಲ್ಲಿನ ಸಂತಾನೋತ್ಪತ್ತಿ ವಿಧಾನಗಳು ಹೇಗೆ ಭಿನ್ನವಾಗಿವೆ?
ಏಕಕೋಶ ಜೀವಿಗಳಲ್ಲಿ ಸಂತಾನೋತ್ಪತ್ತಿ:   
ಏಕಕೋಶ ಜೀಗಳಲ್ಲಿ ದೇಹವು ವಭಜನೆಯಾಗುವ ಮೂಲಕ ಅಲೈಂಗಿಕ ರೀತಿಯಲ್ಲಿ ಸಂತಾನೋತ್ಪತ್ತಿ ನಡೆಯುವುದು.
ಉದಾ: ವಿಧಳನ, ಬಹುವಿಧಳನ, ಮೋಗ್ಗುಗಳು,
 
ಬಹುಕೋಶ ಜೀವಿಗಳಲ್ಲಿನ ಸಂತಾನೋತ್ಪತ್ತಿ.:
ಬಹುಕೋಶ ಜೀವಿಗಳು ಸಂತಾನೋತ್ಪತ್ತಿಗಾಗಿ ವಿಷೇಶವಾದ ಸಂತಾನೋತ್ಪತ್ತಿ ವ್ಯೂಹವನ್ನು ಹೊಂದಿವೆ. ಇವುಗಳು ಲಿಂಗಾಣುಗಳ ಉತ್ಪಾದನೆ, ನಿಶಚನ ಕ್ರಿಯೆಯ ಮೂಲಕ ಸಮತಾನೋತ್ಪತ್ತಿ ನಡೆಸುತ್ತವೆ.

10. ಪ್ರಭೇದಗಳ ಜೀವಿಸಮುದಾಯಗಳಿಗೆ ಸ್ಥಿರತೆಯನ್ನು ಒಸಗಿಸಲು ಸಂತಾನೋತ್ಪತ್ತಿಯು ಹೇಗೆ ಸಹಾಯಕವಾಗಿದೆ?
ಉತ್ತರ: ಜೀವಿಗಳು ತಮ್ಮನೇ ಹೋಲುವ ದೇಹ ವಿನ್ಯಾಸ, ರಚನೆಯನ್ನು ಹೊಂದವ ಮಾಹಿತಿಯನ್ನು ಪೀಳಿಗೆಯು ತಂದೆ ತಾಯಿಯಿಂದ ಪಡೆದ ಡಿ.ಎನ್.ಎ ಅಣುವಿನಲ್ಲಿರುತ್ತದೆ. ಡಿ.ಎನ್.ಎ ಸ್ವಪ್ರತೀಕರಣದ ಮೂಲಕ ತನ್ನನ್ನು ತಾನೆ ನಕಲು ಮಾಡಿಕೊಳ್ಳುವ ಮೂಲಕ ಪ್ರಭೇದಗಳ ಜೀವಿಸಮುದಾಯಗಳಿಗೆ ಸ್ಥಿರತೆಯನ್ನು ಒಸಗಿಸುವುದು. ಆದುದರಿಂದ ಹಸುಗಳು ತಮ್ಮನ್ನೇ ಹೋಲುವ ಮರಿಗಳಿಗೆ ಹಾಗು ನಾಯಿಗಳು ತಮ್ಮನ್ನೇ ಹೋಲುವ ಮರಿಗಳಿಗೆ ಜನ್ಮನೀಡುವುದು.

11. ಗರ್ಭನಿರೋಧಕ ವಿಧಾಗಳನ್ನು ಅಳವಡಿಸಲು ಇರಬಹುದಾದ ಕಾರಣಗಳೇನು?
ಉತ್ತರ: . ಗರ್ಭನಿರೋಧಕ ವಿಧಾಗಳನ್ನು ಅಳವಡಿಸಲು ಇರಬಹುದಾದ ಕಾರಣಗಳೆಂದರೇ,
1. ಅನವಶ್ಯಕ ಅಥವಾ ಬೇಡವಾದ ಗರ್ಭದಾರಣೆಯನ್ನು ತಡೆಗಟ್ಟುವುದು.
2. ಜನಸಂಖ್ಯೆಯನ್ನು ನಿಯಂತ್ರಿಸಲು.
3. ಕಾಂಡೋಮ್ ಬಳಕೆಯಿಂದ ಲೈಂಗಿಕ ರೋಗಗಳು ಹರಡದಂತೆ ತಡೆಗಟ್ಟಲು.



1 comment: